ವಿಶ್ವಕರ್ಮ ಕಲಾ ಪರಿಷತ್ತಿನ ಮೂಲಕ ಕಲಾವಿದರ, ಕುಶಲಕರ್ಮಿಗಳ ಬದುಕನ್ನು ಹಸನಾಗಿಸಲು ಸಹಾಯವಾಗುವ ಮತ್ತೊಂದು ಕಾರ್ಯಕ್ರಮ. ಸಾಮಾಜಿಕ ಮಾಧ್ಯಮ ( ಸೋಷಿಯಲ್ ಮೀಡಿಯ) ವನ್ನು ತಮ್ಮ ಕಲೆ ಹಾಗೂ ಕೌಶಲ್ಯದ ಪ್ರಸಾರ ಹಾಗೂ ಪ್ರಚಾರಕ್ಕೆ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು, ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ, ಕೌಶಲ್ಯಗಳು ಗುರುತಿಸಿಕೊಳ್ಳುವಂತಾಗಲು, ತಮ್ಮ ಕಲಾಕೃತಿಗಳಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹುಟ್ಟಿಕೊಳ್ಳುವಂತೆ ಹೇಗೆ ಪ್ರಯತ್ನಿಸಬಹುದು ಎನ್ನುವ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ವಿಶಿಷ್ಟ ಕಾರ್ಯಾಗಾರವಿದು. ಬನ್ನಿ, ಭಾಗವಹಿಸಿ.
ಈ ಸಂದರ್ಭದಲ್ಲಿ ವಿಶ್ವಕರ್ಮ ಕಲಾ ಪರಿಷತ್ತಿನ ಅಂಗಸಂಸ್ಥೆಯಾದ ವಿಶ್ವಂ ಸ್ಕೂಲ್ ಆಫ್ ಆರ್ಟಿನ ವತಿಯಿಂದ ನಡೆಸಲ್ಪಡುವ ಭಜನಾ ಹಾಗೂ ಸುಗಮ ಸಂಗೀತ ತರಗತಿಗಳಿಗೆ ಹಾಗೂ ಮದರೆಂಗಿ ಕಲಾ ತರಬೇತಿ ತರಗತಿಗಳಿಗೆ ಚಾಲನೆ ನೀಡಲಾಗುವುದು.
05-07-2026 ಕಾರ್ಯಕ್ರಮ ವಿವರ :
9. 30 AM : ನೋಂದಾವಣೆ
10.00 AM : ಉದ್ಘಾಟನೆ
10.15 AM : ದಿಕ್ಸೂಚಿ ಭಾಷಣ
10.45 AM: ಟೀ ವಿರಾಮ
11. 00 AM: ತರಬೇತಿ ಕಾರ್ಯಕ್ರಮ
12. 45 AM: ಫೀಡ್ ಬ್ಯಾಕ್ ಹಾಗೂ ಧನ್ಯವಾದ ಸಮರ್ಪಣೆ
ಈ ಕಾರ್ಯಾಗಾರದಿಂದ ನಾವು ಏನು ಕಲಿಯಬಹುದು :
-
-
-
-
ತಂತ್ರಜ್ಞಾನ ಹಾಗೂ ಮಾರ್ಕೆಟಿಂಗ್ ಕೌಶಲ್ಯಗಳ ಸಮನ್ವಯತೆಯಿಂದ ಕಲಾ ಬದುಕಿನಲ್ಲಿ ಹೇಗೆ ಯಶಸ್ವಿಯಾಗಬಹುದು ಎನ್ನುವ ಸೂಕ್ತ ಮಾರ್ಗದರ್ಶನ, ಅನುಭವೀ ತಂತ್ರಜ್ಷರಿಂದ
-
ಸಾಮಾಜಿಕ ಜಾಲತಾಣದ ಪರಿಣಾಮಕಾರಿ ಸದ್ಬಳಕೆ ಹೇಗೆ ಎನ್ನುವ ಬಗ್ಗೆ ಪ್ರಾತ್ಯಕ್ಷಿಕೆ
-
ಸೂಕ್ತ ಜಾಲತಾಣಗಳ ಮೂಲಕ ನಮ್ಮ ಕಲಾ ಪ್ರತಿಭೆಯನ್ನು ಹೇಗೆ ಬೆಳಕಿಗೆ ತರಬಹುದು
-
ಸುರಕ್ಷಿತವಾದ, ಪರಿಣಾಮಕಾರಿ ರೀತಿಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಹೇಗೆ ಮಾಡಬಹುದು
-
-
-
ಸೀಮಿತವಾದ ಅವಕಾಶ ಇಂದೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ :
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ :
ಶ್ರೀ ಜೀವನ್ ಆಚಾರ್ಯ – 9113649685
ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಬಯಸುವ,
ಅಧ್ಯಕ್ಷರು ಮತ್ತು ಸರ್ವ ಸದಸ್ಯರು,
ವಿಶ್ವಕರ್ಮ ಕಲಾ ಪರಿಷತ್, (ರಿ.), ಮಂಗಳೂರು
www.vishwakrmakala.org
9845663331, 9482184197

