
ಭಾರತದ ಪರಂಪರಾನುಗತ ಕಲೆ ಮತ್ತು ಸಂಸ್ಕೃತಿಗೆ ಮಹತ್ತರ ಕೊಡುಗೆಯನ್ನಿತ್ತಿರುವ ವಿಶ್ವಬ್ರಾಹ್ಮಣ ಸಮುದಾಯದ ಕಲೆ ಹಾಗೂ ಪರಂಪರೆಯ ಬೇರುಗಳನ್ನು ಸಂಘಟನೆಯ ಮೂಲಕ ಸದೃಢಗೊಳಿಸಿ, ರಾಷ್ಟ್ರದ ಅಭ್ಯುದಯಕ್ಕೆ ಪ್ರಯತ್ನಶೀಲರಾಗುವುದು.
ವಿಶ್ವಬ್ರಾಹ್ಮಣ ಸಮುದಾಯದ ಪಂಚಶಿಲ್ಪಗಳು ಅವುಗಳಿಗೆ ಆಧಾರವಾಗಿರುವ ಚಿತ್ರಕಲೆ, ವೇದ, ಪುರಾಣ, ಶಾಸ್ತ್ರಗಳು, ಸಂಗೀತ, ಆಧುನಿಕ ತಂತ್ರಜ್ಞಾನ ಹಾಗೂ ಮಾರುಕಟ್ಟೆ ನಿರ್ವಹಣೆಈ ಎಲ್ಲಾ ವೈವಿಧ್ಯಮಯ ಕ್ಷೇತ್ರಗಳ ಪ್ರತಿಭೆಗಳು ಹಾಗೂ ಸಂಪನ್ಮೂಲವ್ಯಕ್ತಿಗಳನ್ನು ಒಂದೇ ಸೂರಿನಡಿಯಲ್ಲಿ ಬೆಸೆದು, ಪರಸ್ಪರ ಜ್ಞಾನ ಹಾಗೂ ಕೌಶಲ್ಯಗಳ ಪರಸ್ಪರ ವಿನಿಮಯದ ಮೂಲಕ ಸಮಾಜದ ಹಾಗೂ ತನ್ಮೂಲಕ ರಾಷ್ಟ್ರದ ಸಮಗ್ರ ಅಭ್ಯುದಯವನ್ನು ಸಾಧಿಸುವುದು.
ಸಂಘಟಿತರಾಗಿ ಸರಕಾರದ ಸವಲತ್ತುಗಳನ್ನು ಪಡೆಯಲು, ಸಮಾಜದ ಪ್ರತಿಯೋರ್ವ ಕಲಾವಿದನಿಗೂ, ಶಿಲ್ಪಿಯ ಕುಶಲಕರ್ಮಿಗೂ ಸರಕಾರದ ಸೌಲಭ್ಯ ದೊರೆಯುವಂತಾಗಲು ಪ್ರಯತ್ನಶೀಲರಾಗುವುದು.
ಸಮಾಜದ ಕಲಾವಿದರಿಗೆ, ಶಿಲ್ಪಿಗಳಿಗೆ, ಕುಶಲಕರ್ಮಿಗಳಿಗೆ ಆಧುನಿಕ ತಂತ್ರಜ್ಞಾನದ ಬಳಕೆ, ಡಿಜಿಟಲ್ ಮಾರ್ಕೆಟಿಂಗ್, ವ್ಯಾವಹಾರಿಕ ಕೌಶಲ್ಯಗಳ ತರಬೇತಿಯನ್ನು ನೀಡಿ ಅವರನ್ನು ಯಶಸ್ವೀ ಉದ್ಯಮಿಗಳಾಗಿ ಬೆಳೆಯಲು ಬೇಕಾದ ಪ್ರೋತ್ಸಾಹ ಹಾಗೂ ಮಾರ್ಗದರ್ಶನವನ್ನು ನೀಡುವುದು.
ಸರ್ಕಾರದ ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ದೊಡ್ಡ ಮಟ್ಟದ ಕಲಾ ಪ್ರದರ್ಶನ, ಕಲೋತ್ಸವ, ಕಲಾ ಸಂತೆಗಳನ್ನು ಏರ್ಪಡಿಸಿ ಮಧ್ಯವರ್ತಿಗಳ ನೆರವಿಲ್ಲದೆ ಕಲಾವಿದರು, ಶಿಲ್ಪಿಗಳು, ಕುಶಲಕರ್ಮಿಗಳು ತಮ್ಮ ಕಲಾಕೃತಿಗಳನ್ನು ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವುದು.
ಕಲಾ ಹಾಗೂ ಶಿಲ್ಪ ಪರಂಪರೆಯನ್ನು ಉಳಿಸಿ ಬೆಳೆಸಲು ವೈವಿಧ್ಯಮಯ ಕಲಾ ಪ್ರಕಾರಗಳನ್ನು ಕಲಿಸುವಂತಹ ಕಲಾಶಾಲೆಗಳನ್ನು ಸ್ಥಾಪಿಸಿ , ನಡೆಸುವುದು.
ಕಲೆ ಹಾಗೂ ಶಿಲಾ ಪರಂಪರೆಯ ಕೊಂಡಿಗಳನ್ನು ಸುದೃಢ ಪಡಿಸಲು, ಗ್ರಂಥಾಲಯಗಳನ್ನು, ಡಿಜಿಟಲ್ ಲೈಬ್ರೆರಿ, ಅಧ್ಯಯನ ಕೇಂದ್ರಗಳನ್ನು, ಸಂಶೋಧನಾಕೇಂದ್ರಗಳನ್ನು ಸ್ಥಾಪಿಸುವುದು.
ಶಿಲ್ಪಿಗಳಿಗೆ, ಕಲಾವಿದರಿಗೆ, ಕುಶಲಕರ್ಮಿಗಳಿಗೆ ಸಹಾಯಕವಾಗಬಲ್ಲ ನೂತನ ತಂತ್ರಾಂಶಗಳನ್ನು (ಸಾಫ್ಟ್ ವೇರ್), ಆೄಪ್ ಗಳನ್ನು, ಜಾಲತಾಣಗಳನ್ನು ಅಭಿವೃದ್ಧಿ ಪಡಿಸುವುದು.
ಹಿರಿಯ ಕಲಾವಿದರನ್ನು, ಶಿಲ್ಪಿಗಳನ್ನು, ಕುಶಲಕರ್ಮಿಗಳನ್ನು ಆಗಾಗ್ಯೆ ಗುರುತಿಸಿ ಗೌರವಿಸುವುದು. ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು, ಕಲಾ ಶಿಬಿರಗಳನ್ನು ನಡೆಸುವುದು.
ಆರ್ಥಿಕವಾಗಿ ದುರ್ಬಲರಾದ, ಅನಾರೋಗ್ಯದಿಂದ ಪೀಡಿತರಅಗಿರುವ ಕಲಾವಿದರ, ಶಿಲ್ಪಿ, ಕುಶಲಕರ್ಮಿಗಳ ಕುಟುಂಬಕ್ಕೆ ಸಕಾಲದಲ್ಲಿ ಆರ್ಥಿಕ ನೆರವನ್ನು ನೀಡುವುದು.
ಕಲಾವಿದ/ ಶಿಲ್ಪಿ/ ಕುಶಲ ಕರ್ಮಿ ಕುಟುಂಬದ ಬಡ ವಿದ್ಯಾರ್ಥಿಯ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ನೆರವನ್ನು ನೀಡುವುದು.
ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳು ವಿಶ್ವಬ್ರಾಹ್ಮಣ ಸಮಾಜದ ಅರ್ಹ ಪ್ರತಿಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಲಭಿಸುವಂತಾಗಲು ಪ್ರಯತ್ನಿಸುವುದು.
ಸರ್ಕಾರದ ನೆರವಿನಿಂದ ಕಲಾವಿದರ, ಶಿಲ್ಪಿ ಹಾಗೂ ಕುಶಲಕರ್ಮಿಗಳ ಕಲಾ ಕೃತಿಗಳನ್ನು ಪ್ರದರ್ಶಿಸಲು ಹಾಗೂ ಮಾರಾಟಮಾಡಲು ಪ್ರತೀ ಜಿಲ್ಲೆಯಲ್ಲಿಯೂ ವಿಶ್ವಕರ್ಮ ಕಲಾ ಕೇಂದ್ರಗಳನ್ನು ಸ್ಥಾಪಿಸಲು ಪ್ರಯತ್ನಿಸುವುದು.
ಶಿಲ್ಪಿಗಳಿಗೆ, ಕಲಾವಿದರಿಗೆ, ಕುಶಲಕರ್ಮಿಗಳಿಗೆ ಸಮಾಜದಲ್ಲಿ ಅನ್ಯಾಯವಾದಾಗ ಸಮಾಜದ ಇತರ ಸಂಘಟನೆಗಳ ಸಹಾಯದೊಂದಿಗೆ ಶೋಷಿತರ ಪರವಾಗಿ ಹೋರಾಟ ನಡೆಸುವುದು.
ಕಲಾವಿದ/ ಶಿಲ್ಪಿ/ ಕುಶಲ ಕರ್ಮಿ ಕುಟುಂಬದ ಬಡ ವಿದ್ಯಾರ್ಥಿಯ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ನೆರವನ್ನು ನೀಡುವುದು.