Preloader

ಸ್ಥಾಪನೆ : 26-03-2023

ವಿಶ್ವಕರ್ಮ ಕಲಾ ಪರಿಷತ್‌ (ರಿ.), ಮಂಗಳೂರು

ಪರಂಪರೆ ಹಾಗೂ ಸಂಸ್ಕೃತಿಯ ಸಂಪನ್ನತೆಯಿಂದ ರಾಷ್ಟ್ರಾಭ್ಯುದಯಕ್ಕಾಗಿ ಸಂಘಟನೆ

ಸ್ಥಾಪನೆ : 26-03-2023

Vishwakarma Kala Parishath (R.)

ಪರಂಪರೆ ಹಾಗೂ ಸಂಸ್ಕೃತಿಯ ಸಂಪನ್ನತೆಯಿಂದ ರಾಷ್ಟ್ರಾಭ್ಯುದಯಕ್ಕಾಗಿ ಸಂಘಟನೆ

ಸ್ಥಾಪನೆ : 26-03-2023

“ಸಮರ್ಪಣಂ” ಕಲೋತ್ಸವ

ಪರಂಪರೆ ಹಾಗೂ ಸಂಸ್ಕೃತಿಯ ಸಂಪನ್ನತೆಯಿಂದ ರಾಷ್ಟ್ರಾಭ್ಯುದಯಕ್ಕಾಗಿ ಸಂಘಟನೆ

ವಿಶ್ವಕರ್ಮ ಕಲಾ ಪರಿಷತ್‌

ಪರಿಚಯ

ಪರಂಪರೆ ಹಾಗೂ ಸಂಸ್ಕೃತಿಯ ಸಂಪನ್ನತೆಯಿಂದ ರಾಷ್ಟ್ರಾಭ್ಯುದಯಕ್ಕಾಗಿ ಸಂಘಟನೆ

ಪ್ರತಿಭೆಯನ್ನು ಸದ್ವಿನಿಯೋಗ ಪಡಿಸಿಕೊಂಡು, ಸಂಘಟಿತರಾಗಿ, ಮಾಹಿತಿ, ಜ್ಞಾನ, ಕೌಶಲ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು, ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಉತ್ತಮ ಬದುಕು ಹಾಗೂ ಸಮಾಜವನ್ನು ಕಟ್ಟುವ ಧ್ಯೇಯದೊಂದಿಗೆ ವಿಶ್ವಬ್ರಾಹ್ಮಣ ಸಮಾಜದ ಎಲ್ಲಾ ಪ್ರಕಾರದ ಕಲಾವಿದರನ್ನೊಳಗೊಂಡ ನೂತನ ಸಂಘಟನೆಯನ್ನು ಜಗಜ್ಜನನಿ ಶ್ರೀ ಕಾಳಿಕಾಂಬೆಯ ದಿವ್ಯ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀಮದ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ‘ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು’ ಎಂಬ ಅಭಿಧಾನದ ಈ ಸಂಘಟನೆಯನ್ನು ೨೬-೦೩-೨೦೨೩ರಂದು ಪ್ರಾರಂಭಿಸಲಾಯಿತು.. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮಾತ್ರವಲ್ಲದೆ ಇತರ ರಾಜ್ಯಗಳಿಂದಲೂ ವಿಶ್ವಬ್ರಾಹ್ಮಣ ಕಲಾವಿದರು ಈ ಸಂಘಟನೆಯ ಸದಸ್ಯರಾಗಿದ್ದಾರೆ

Mission

ವಿಶ್ವಕರ್ಮ ಕಲಾ ಪರಿಷತ್‌ನ ಧ್ಯೇಯೋದ್ದೇಶಗಳು

ಭಾರತದ ಪರಂಪರಾನುಗತ ಕಲೆ ಮತ್ತು ಸಂಸ್ಕೃತಿಗೆ ಮಹತ್ತರ ಕೊಡುಗೆಯನ್ನಿತ್ತಿರುವ ವಿಶ್ವಬ್ರಾಹ್ಮಣ ಸಮುದಾಯದ ಕಲೆ ಹಾಗೂ ಪರಂಪರೆಯ ಬೇರುಗಳನ್ನು ಸಂಘಟನೆಯ ಮೂಲಕ ಸದೃಢಗೊಳಿಸಿ, ರಾಷ್ಟ್ರದ ಅಭ್ಯುದಯಕ್ಕೆ ಪ್ರಯತ್ನಶೀಲರಾಗುವುದು

ವಿಶ್ವಬ್ರಾಹ್ಮಣ ಸಮುದಾಯದ ಪಂಚಶಿಲ್ಪಗಳು ಅವುಗಳಿಗೆ ಆಧಾರವಾಗಿರುವ ಚಿತ್ರಕಲೆ, ವೇದ, ಪುರಾಣ, ಶಾಸ್ತ್ರಗಳು, ಸಂಗೀತ, ಆಧುನಿಕ ತಂತ್ರಜ್ಞಾನ ಹಾಗೂ ಮಾರುಕಟ್ಟೆ ನಿರ್ವಹಣೆಈ ಎಲ್ಲಾ ವೈವಿಧ್ಯಮಯ ಕ್ಷೇತ್ರಗಳ ಪ್ರತಿಭೆಗಳು ಹಾಗೂ ಸಂಪನ್ಮೂಲವ್ಯಕ್ತಿಗಳನ್ನು ಒಂದೇ ಸೂರಿನಡಿಯಲ್ಲಿ ಬೆಸೆದು, ಪರಸ್ಪರ ಜ್ಞಾನ ಹಾಗೂ ಕೌಶಲ್ಯಗಳ ಪರಸ್ಪರ ವಿನಿಮಯದ ಮೂಲಕ ಸಮಾಜದ ಹಾಗೂ ತನ್ಮೂಲಕ ರಾಷ್ಟ್ರದ ಸಮಗ್ರ ಅಭ್ಯುದಯವನ್ನು ಸಾಧಿಸುವುದು.

ಸಂಘಟಿತರಾಗಿ ಸರಕಾರದ ಸವಲತ್ತುಗಳನ್ನು ಪಡೆಯಲು, ಸಮಾಜದ ಪ್ರತಿಯೋರ್ವ ಕಲಾವಿದನಿಗೂ, ಶಿಲ್ಪಿಯ ಕುಶಲಕರ್ಮಿಗೂ ಸರಕಾರದ ಸೌಲಭ್ಯ ದೊರೆಯುವಂತಾಗಲು ಪ್ರಯತ್ನಶೀಲರಾಗುವುದು.

Activities

ಚಟುವಟಿಕೆಗಳು

ವಿಶ್ವಕರ್ಮ ಕಲಾ ಪರಿಷತ್‌ ಕೈಗೊಂಡ ಚಟುವಟಿಕೆಗಳು

ಕಲೋತ್ಸವ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರ ವೈವಿಧ್ಯಮಯ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವು ಅಮೋಘವಾಗಿತ್ತು

ಆರ್ಟಿಸನ್‌ ಕಾರ್ಡ್‌ ಹಾಗೂ ಪಿ. ಎಂ. ವಿಶ್ವಕರ್ಮ ಯೋಜನೆಗಳ

ಸಮಾಜದ ಕಲಾವಿದರಿಗೆ ಹಾಗೂ ಕುಶಲಕರ್ಮಿಗಳಿಗೆ ಸರ್ಕಾರದ ಸವಲತ್ತು ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಕರಕುಶಲ ಅಭಿವೃದ್ಧಿ ಇಲಾಖೆಯ

ಹಿರಿಯ ಕಲಾವಿದರಿಗೆ ಹಾಗೂ ಕಲಾಪೋಷಕರಿಗೆ ಗೌರವಾಭಿನಂದನೆ

ʼಸಮರ್ಪಣಂ ಕಲೋತ್ಸವʼದ ಸಂದರ್ಭದಲ್ಲಿ ಕಲಾವಿದರ ಮತ್ತು ಕುಶಲ ಕರ್ಮಿಗಳ ಮೇಲೆ ಅಪಾರ ಅಭಿಮಾನ

Samarpanam

ಸಮರ್ಪಣಂ

ಉದ್ಘಾಟನೆ

“ಸಮರ್ಪಣಂ” ಕಲೋತ್ಸವ ಇದರ ಉದ್ಘಾಟನಾ ಸಮಾರಂಭವು ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ದಿನಾಂಕ 26-03-2023 ಭಾನುವಾರದಂದು ಅದ್ದೂರಿಯಾಗಿ ನಡೆಯಿತು

“ಚಿತ್ರಕಲಾ ಕುಂಚ” (Live speed art)

ವೇದಿಕೆಯಲ್ಲಿ ಒಂದೇ ಹಾಡಿಗೆ ಎಂಟು ಮಂದಿ ಕಲಾವಿದರು ನೀಡಿದ “ಚಿತ್ರಕಲಾ ಕುಂಚ” (Live speed art) ಕಾರ್ಯಕ್ರಮವು ಕಿಕ್ಕಿರಿದ ಜನಮನದ ಮೆಚ್ಚುಗೆಗೆ ಪಾತ್ರವಾಯಿತು

ಕಲಾವಿದರ ವೈವಿಧ್ಯಮಯ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರ ವೈವಿಧ್ಯಮಯ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವು ಅಮೋಘವಾಗಿತ್ತು. ಪ್ರತಿಯೊಂದು ಕಲಾಕೃತಿಯಲ್ಲೂ ಕಲಾಕಾರರ ಕೈಚಳಕ ವಿಶೇಷವಾಗಿ ಎದ್ದು ಕಾಣುತ್ತಿತ್ತು.

Other Activities

ಇತರೆ ಚಟುವಟಿಕೆಗಳು

ವಿಶ್ವಂ ಸ್ಕೂಲ್‌ ಆಫ್‌ ಆರ್ಟ್‌

ವೈವಿಧ್ಯಮಯ ಕಲೆಗಳನ್ನು ಒಂದೇ ಸೂರಿನಡಿಯಲ್ಲಿ ಸುಲಭವಾಗಿ ಕಲಿಯುವಂತಹ ಸೌಲಭ್ಯವನ್ನು ಒದಗಿಸುತ್ತಿದೆ. ಚಿತ್ರ ಕಲೆಯಿಂದ ಹಿಡಿದು ಶಿಲ್ಪಕಲೆಯವರೆಗೆ ವೈವಿಧ್ಯಮಯ ಕಲಾ ಪ್ರಕಾರಗಳನ್ನು ನುರಿತ ಕಲಾ ಶಿಕ್ಷಕರಿಂದ ಕಲಿಯುವ ಅವಕಾಶವನ್ನು ಒದಗಿಸುತ್ತಿದೆ.

ಅಶಕ್ತ ಕಲಾವಿದರ/ ಕುಶಲಕರ್ಮಿಗಳ ಪ್ರತಿಭಾವಂತ ಮಕ್ಕಳಿಗೆ ನೆರವಿನ ಹಸ್ತ

ತಂದೆಯನ್ನು ಕಳೆದುಕೊಂಡಿರುವ ಪ್ರತಿಭಾವಂತ ಗಾಯಕ ವಿದ್ಯಾರ್ಥಿಯ ಶಿಕ್ಷಣಕ್ಕೆ ನೆರವನ್ನು ನೀಡಲು, ಹಾಗೂ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿರುವ ಕುಶಲ ಕರ್ಮಿಯೋರ್ವರ ಪುತ್ರನ ಶಿಕ್ಷಣಕ್ಕಾಗಿ ತಲಾ ರೂ. 10,000/- ಮೊತ್ತವನ್ನು ನೀಡಲಾಗಿದೆ

ವಿಶ್ವಕರ್ಮ ಕಲಾ ಶಿಬಿರ

ವಿಶ್ವಬ್ರಾಹ್ಮಣ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜನ್ಮತಃ ಕಲಾವಿದರೂ, ಪ್ರತಿಭಾವಂತರಾದರೂ ಕಲಾ ಮಾಧ್ಯಮವನ್ನು ಸದ್ವಿನಿಯೋಗ ಪಡಿಸಿಕೊಂಡು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಸಾಧಕರಾಗಿ ಬೆಳೆಯಲು ಪ್ರೇರಣೆ

WHY Vishwam School of Arts

ವಿಶ್ವಂ ಸ್ಕೂಲ್‌ ಆಫ್‌ ಆರ್ಟ್‌

ವಿಶ್ವಕರ್ಮ  ಕಲಾ ಪರಿಷತ್ ಪ್ರಾರಂಭಿಸಿರುವ “ವಿಶ್ವಂ ಸ್ಕೂಲ್ ಆಫ್ ಆರ್ಟ್” ವೈವಿಧ್ಯಮಯ ಕಲೆಗಳನ್ನು ಒಂದೇ ಸೂರಿನಡಿಯಲ್ಲಿ ಸುಲಭವಾಗಿ ಕಲಿಯುವಂತಹ ಸೌಲಭ್ಯವನ್ನು ಒದಗಿಸುತ್ತಿದೆ

Years of experience
0 +
Teachers
0 +
Students
0 +
CUSTOMER REVIEW
0 k

TESTIMONIALS

What people say about us

ವಿಶ್ವಕರ್ಮ ಕಲಾ ಪರಿಷತ್ತಿನ ಅಮೂಲ್ಯ ಕೊಡುಗೆಗಳಿಗೆ ನನ್ನ ಹೃದಯಪೂರ್ವಕ ಬೆಂಬಲ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಸಾಂಪ್ರದಾಯಿಕ ಕಲೆ, ಕರಕುಶಲ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಈ ಸಂಸ್ಥೆ ನಿರ್ವಹಿಸುತ್ತಿರುವ ಪಾತ್ರ ನಿಜಕ್ಕೂ ಶ್ಲಾಘನೀಯವಾಗಿದೆ. ವಿಶ್ವಕರ್ಮ ಕಲಾ ಪರಿಷತ್ತು ನಮ್ಮ ಪೂರ್ವಿಕರ ಸಮೃದ್ಧ ಪರಂಪರೆಯನ್ನು ಮುಂದುವರಿಸುತ್ತಿರುವ ಕುಶಲಕರ್ಮಿಗಳ ಪ್ರತಿಭೆಯನ್ನು ಪೋಷಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳು ಮತ್ತು ಸಮುದಾಯ ಸೇವಾ ಚಟುವಟಿಕೆಗಳ ಮೂಲಕ ಈ ಸಂಸ್ಥೆ ಅನೇಕ ಕಲಾವಿದರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ. ಒಬ್ಬ ಶಿಕ್ಷಣತಜ್ಞ ಮತ್ತು ಸಮುದಾಯ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಯಾಗಿ, ಈ ಸಂಸ್ಥೆಯ ಪರಿವರ್ತನಕಾರಿ ಕಾರ್ಯಗಳನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಸಾಂಪ್ರದಾಯಿಕ ಕಲೆಯನ್ನು ಆಧುನಿಕ ಪ್ರಸ್ತುತತೆಯೊಂದಿಗೆ ಸಮನ್ವಯಗೊಳಿಸುವ ಅವರ ಸಾಮರ್ಥ್ಯ ನಿಜಕ್ಕೂ ಅಭಿನಂದನೀಯ. ವಿಶ್ವಕರ್ಮ ಕಲಾ ಪರಿಷತ್ತಿನ ಉದಾತ್ತ ಉದ್ದೇಶಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಡಾ. ಎ. ಪಿ. ಆಚಾರ್ AIC Nitte Incubation Centre, Nitte Deemed to be University, Udupi

My association with Vishwakarma Kala Parishath has been an honor and a deeply enriching experience. It stands as a powerful platform dedicated to preserving and promoting our traditional art, culture, and craftsmanship with sincerity and vision. Their commitment to supporting artists, recognizing talent, and creating meaningful opportunities is truly commendable. Vishwakarma Kala Parishath is not just encouraging art, it is actively contributing to the continuity of our cultural heritage. I take immense pride in being associated with a platform that genuinely values art and empowers artists across communities.

Karan Acharya Artist & Illustrator

ವಿಶ್ವಕರ್ಮ ಕಲಾ ಪರಿಷತ್ ನವರು ಸಮಾಜದ ಉನ್ನತಿಯಲ್ಲಿ ಕಲಾ ಪಾತ್ರವನ್ನು ಅಭಿವ್ಯಕ್ತ ಪಡಿಸುತ್ತಾ ನಿರಂತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಾರೆ. ' ಕಲಾ ಪರ್ಬ ' ದಲ್ಲಿ ತಮ್ಮ ಕಲಾ ಛಾಪು ನಿರ್ಮಿಸಿ ಪರ್ಬಕ್ಕೆ ಒಂದು ವಿಶೇಷ ಮೆರುಗು ನೀಡಿರುತ್ತಾರೆ. ಸದಾ ತಮ್ಮ ವರ್ಣ ಬೆಳಕು ಪಸರಿಸುತ್ತಲೇ ಇರಲಿ.

ದಿನೇಶ್ ಹೊಳ್ಳ. ಅಂತರ್ರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ, ಪರಿಸರ ಪ್ರೇಮಿ ಹಾಗೂ ಲೇಖಕ

ವಿಶ್ವಕರ್ಮಕಲಾ ಪರಿಷತ್ ರಿಜಿಸ್ಟರ್ಡ್ ಮಂಗಳೂರು ತನ್ನ ಕಲೋತ್ಸವವನ್ನು ಸಮರ್ಪಣಾ ಮನೋಭಾವನೆಯಲ್ಲಿ ಅತ್ಯಂತ ಸಾಹಿತ್ಯ ಸೌಂದರ್ಯ ಪ್ರಜ್ಞೆಯೊಂದಿಗೆ ನಡೆಸುತ್ತಿದೆ ಎಂಬುದಕ್ಕೆ ಎರಡು ಮಾತಿಲ್ಲ. ವಿಶ್ವಕರ್ಮಕಲಾ ಪ್ರಶಸ್ತಿ, ಗೌರವಾಭಿನಂದನೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಸಹಾಯ ನೀಡಿಕೆ ಇತ್ಯಾದಿ ಗಮನಾರ್ಹ ಸಂಗತಿ. ಇನ್ನು ಉದ್ಘಾಟನೆ, ಗೋಷ್ಠಿ, ಸಾಂಸ್ಕೃತಿಕ ಸರಣಿ, ಸಮಾಪನ ಎಲ್ಲವೂ ಅಚ್ಚುಕಟ್ಟು, ಆಕರ್ಷಕ ಮತ್ತು ಸಮಯೋಚಿತ ಎಂದು ಓರ್ವ ವಿಕ್ಷಕನಾಗಿ ಹೇಳಲು ಹೆಮ್ಮೆ

ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಪ್ರಸಿದ್ಧ ಗಾಯಕರು, ಸಂಗೀತ ನಿರ್ದೇಶಕರು, ಕೀರ್ತನಕಾರರು ಹಾಗೂ ಮಿಮಿಕ್ರಿ ಕಲಾವಿದರು

ಭಾರತೀಯ ಚಿಂತನೆಗಳಲ್ಲಿ ಕಲೆ ಎಂದರೆ ರಸದ ನಿಯಂತ್ರಿತ, ಲಯಬದ್ಧ ಅಭಿವ್ಯಕ್ತಿ. ಭಾರತೀಯ ಅಲಂಕಾರ (aesthetics)ಶಾಸ್ತ್ರದಲ್ಲಿ 'ರಸ' ತುಂಬಾ ಮುಖ್ಯವಾದ ವಿಚಾರ. ರಸಾಸ್ವಾದನ ಶಕ್ತಿಯನ್ನೇ 'ರಂಜನೀವೃತ್ತಿ' ಎಂದು ಕರೆದಿದ್ದಾರೆ. 'ರಂಜನ' ಎಂದರೆ ಬಣ್ಣ ತುಂಬುವುದು. ಕಲೆಯಲ್ಲಿ ಎಲ್ಲ ವಿವರಗಳೂ ರಸದಿಂದಾಗಿ ವರ್ಣಮಯ ವಾಗಿರುತ್ತವೆ. ನಿಜವಾಗಿಯೂ ಎಲ್ಲಾ ಕಲಾಸೃಷ್ಟಿಯೂ ರಸಭರಿತ ಅನುಭವವೇ. ಈ ನಾಡಿನ ಸಾಹಿತ್ಯ, ಪರಂಪರೆ, ಆದರ್ಶಗಳನ್ನು ಗಮನಿಸಿ, ಈ ನಾಡಿನ ದಾರ್ಶನಿಕರು ನಡೆಸಿರುವ ಅನ್ವೇಷಣೆ, ಕಲಾವಿದರು ಮಾಡಿರುವ ಕೆಲಸ, ನಮ್ಮ ಜನರ ಸಂಗೀತ, ನಮ್ಮ ಧರ್ಮದ ಪರಂಪರಾಗತ ಉದಾತ್ತತೆಗಳ ಬೇರಿನೊಂದಿಗೆ, ಪ್ರಸ್ತುತದ ನವತಾಂತ್ರಿಕತೆಯ ರೆಕ್ಕೆಗಳನ್ನು ಮೈಗೂಡಿಸಿಕೊಂಡು, ವಿಶ್ವಕರ್ಮ ಕಲಾಪರಿಷತ್ತಿನ ಈ ವೇದಿಕೆ ನಮ್ಮ ಎಲ್ಲಾ ಕಲಾವಿದರ 'ಋತ' ಕಾರಂಜಿಯೊಂದಿಗೆ ಸದಾ ಚೈತನ್ಯಪೂರ್ಣವಾಗಿ ಪುಟಿಯುತ್ತಿರಲಿ.

Prof. G. Yashavanth Acharya. ( Rtd.) Professor in English, Poornaprajna College, Udupi Member, Advisory Committee, Vishwakarma Kala Parishath, (Regd.), Mangaluru

Vishwakarma Kala Parishat is more than an organization—it is a dynamic platform driving visibility, recognition, & growth for artists. Its programs are empowering talent & bringing artists to the forefront. A remarkable initiative for the future of art & culture.

Prajwal Achar Director, SKF Elixer India Pvt Ltd .

ಡಾ. ಎಸ್.ಪಿ. ಗುರುದಾಸ್ ರವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವಕರ್ಮ ಕಲಾಪರಿಷತ್ ಸಂಸ್ಥೆಯ ಸೇವೆಯನ್ನು ನೋಡುವುದು ನನಗೆ ಅತ್ಯಂತ ಸಂತೋಷ ಮತ್ತು ಗೌರವದ ವಿಷಯವಾಗಿದೆ. ಇಂದಿನ ಕಾಲಘಟ್ಟದಲ್ಲಿ ಪರಂಪರೆಯ ಕಲೆಗಳು ಉಳಿದು ಬೆಳೆಯಬೇಕಾದ ಅವಶ್ಯಕತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಈ ಕಲಾಪರಿಷತ್ ವಿವಿಧ ಕಲಾರೂಪಗಳಲ್ಲಿ ಪರಿಣತಿ ಹೊಂದಿರುವ ಹಿರಿಯರು ಮತ್ತು ಯುವ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಉತ್ತಮ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಚಿತ್ರಕಲೆ, ಶಿಲ್ಪಕಲೆ, ರಂಗೋಲಿ, ಮಣ್ಣಿನ ಕಲೆ, ರೇಖಾಚಿತ್ರ ಸೇರಿದಂತೆ ಅನೇಕ ಕಲಾ ಕ್ಷೇತ್ರಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಾಗಾರಗಳು, ಪ್ರದರ್ಶನಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ಒದಗಿಸಿದೆ. ಇದು ವಿಶ್ವಕರ್ಮ ಸಮುದಾಯದ ಕಲಾತ್ಮಕ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯವಾಗಿದೆ. ‘ಸಮರ್ಪಣಂ ಕಲೋತ್ಸವ’ ಎಂಬ ಕಾರ್ಯಕ್ರಮವು ಕೇವಲ ಒಂದು ಉತ್ಸವವಲ್ಲ, ನಮ್ಮ ಕಲೆ ಮತ್ತು ಸಂಸ್ಕೃತಿಯತ್ತ ಇರುವ ಭಕ್ತಿ ಹಾಗೂ ಸಮರ್ಪಣೆಯ ಪ್ರತಿಬಿಂಬವಾಗಿದೆ. ಈ ಕಾರ್ಯಕ್ರಮದ ಮೂಲಕ ಕಲಾವಿದರ ಪರಿಶ್ರಮ ಮತ್ತು ಸೃಜನಶೀಲತೆಯನ್ನು ಗೌರವಿಸುವುದು ಶ್ಲಾಘನೀಯ ಪ್ರಯತ್ನವಾಗಿದೆ. ವಿಶ್ವಕರ್ಮ ಕಲಾಪರಿಷತ್‌ನ ಎಲ್ಲಾ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಇವರ ಸೇವೆ ಮುಂದುವರಿಯಲಿ, ನಮ್ಮ ಪರಂಪರೆಯ ಕಲೆಯ ಘನತೆ ಇನ್ನಷ್ಟು ಹೆಚ್ಚಲಿ ಎಂದು ಹಾರೈಸುತ್ತೇನೆ.

ರಥಶಿಲ್ಪಿ ರಾಜಗೋಪಾಲ ಆಚಾರ್ಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ, ಕುಂಭಾಶಿ

From the very beginning, my journey with Vishwakarma Kala Parishath has been more than just an association—it has been an emotional and cultural commitment. As a life member from day one, I have had the privilege of witnessing the inspiring growth of into a vibrant platform that celebrates art, talent, and tradition. Under the visionary leadership of Dr. S. P. Gurudas, the Parishath has created meaningful opportunities for artists and art lovers alike, shaping a strong cultural movement over the years. ✨ Distinguished Guests Who Graced Our Events: - Dr. G. Gnanananda - Sri Arun Yogiraj - Sri Pramod Maravante Their presence has brought immense inspiration, recognition, and credibility to our initiatives. Signature events like Samarpana stand as a testament to our commitment to nurturing creativity and honoring excellence. These are not just events—they are celebrations of culture, community, and collective passion. Being part of this journey fills me with pride and gratitude. I look forward to seeing Vishwakarma Kala Parishath continue to grow and inspire many more in the years ahead.

Haridas S. P. Acharya Director Wipro Ltd., , ಬೆಂಗಳೂರು

GALLERY

Our image gallery