Preloader

ವಿಶ್ವಕರ್ಮ ಕಲೋತ್ಸವ

  1. Home
  2. Samarpanam

“ಸಮರ್ಪಣಂ” ವಿಶ್ವಕರ್ಮ ಕಲೋತ್ಸವ

ವಿಶ್ವಕರ್ಮ ಕಲಾ ಪರಿಷತ್‌

ಸಮರ್ಪಣಂ

ಸಮರ್ಪಣಂ” ವಿಶ್ವಕರ್ಮ ಕಲೋತ್ಸವ ಇದರ ಉದ್ಘಾಟನಾ ಸಮಾರಂಭವು ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ದಿನಾಂಕ 26-03-2023 ಭಾನುವಾರದಂದು ಅದ್ದೂರಿಯಾಗಿ ನಡೆಯಿತು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರ ವೈವಿಧ್ಯಮಯ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವು ಅಮೋಘವಾಗಿತ್ತು. ಪ್ರತಿಯೊಂದು ಕಲಾಕೃತಿಯಲ್ಲೂ ಕಲಾಕಾರರ ಕೈಚಳಕ ವಿಶೇಷವಾಗಿ ಎದ್ದು ಕಾಣುತ್ತಿತ್ತು.

ಇದಲ್ಲದೆ ಕಲಾ ಪರಿಷತ್ತಿನ ಅಂಗಸಂಸ್ಥೆಯಾದ ʼವಿಶ್ವಂ ಸ್ಕೂಲ್‌ ಆಫ್‌ ಆರ್ಟ್‌ʼ ಇದರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿಯೂ, ವಿಶ್ವಕರ್ಮ ಯುವ ಮಿಲನ ಸಂಸ್ಥೆಯು ಆಯೋಜಿಸಿದ್ದ ʼವಿಶ್ವಕರ್ಮ ಯುವಸಮ್ಮೇಳನʼದ ಸಂದರ್ಭದಲ್ಲಿಯೂ ಕಲಾ ಪರಿಷತ್ತಿನ ಸದಸ್ಯರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

“ಚಿತ್ರಕಲಾ ಕುಂಚ” (Live speed art)

ಉದ್ಘಾಟನಾ ವೇದಿಕೆಯಲ್ಲಿ ಒಂದೇ ಹಾಡಿಗೆ ಎಂಟು ಮಂದಿ ಕಲಾವಿದರು ನೀಡಿದ “ಚಿತ್ರಕಲಾ ಕುಂಚ” (Live speed art) ಕಾರ್ಯಕ್ರಮವು ಕಿಕ್ಕಿರಿದ ಜನಮನದ ಮೆಚ್ಚುಗೆಗೆ ಪಾತ್ರವಾಯಿತು.

ವಸ್ತು ಪ್ರದರ್ಶನ

ಕಾರ್ಯಕ್ರಮದಲ್ಲಿ ಅಸಂಖ್ಯಾತ ಸೂಕ್ಷ್ಮ ಕಲಾಕೃತಿಗಳು, ನೂರಾರು ಚಿತ್ರಕಲೆಗಳು, ಪ್ರತಿಕೃತಿಗಳು, ಕಾಷ್ಟ್ಯ ಶಿಲ್ಪಗಳು, ಬೆಳ್ಳಿಯ ಪರಿಕರಗಳು ಮತ್ತು ಕೈ ಮಗ್ಗದ ವಸ್ತುಗಳು ಜನರ ಗಮನ ಸೆಳೆದವು