ಕಲಾವಿದರು ಕುಶಲಕರ್ಮಿಗಳು ಶಿಲ್ಪಿಗಳು AI ಇತ್ಯಾದಿ ವಿನೂತನ ತಂತ್ರಜ್ಞಾನಗಳ ಆಗಮನದಿಂದ ತಮ್ಮ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಆದರೆ ನಿಜವಾದ ಪ್ರತಿಭೆ ಹಾಗೂ ಕೌಶಲ್ಯವುಳ್ಳವರು ಆತಂಕ ಪಡಬೇಕಿಲ್ಲ. ಎ ಐ ಇತ್ಯಾದಿ ಡಿಜಿಟಲ್ ಟೂಲ್ ಗಳನ್ನು ಬಳಸಿ ಸಮಯ ಹಾಗೂ ಪರಿಕರಗಳ ಬಳಕೆಯನ್ನು ಕಡಿಮೆ ಮಾಡಿಕೊಂಡು ಇನ್ನೂ ವ್ಯಾಪಕವಾದ ಮಾರುಕಟ್ಟೆಗೆ ತಮ್ಮ ಕಲಾಕೃತಿಗಳು ತಲುಪುವಂತೆ ಮಾಡಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಬಹುದು ಎಂದು ಖ್ಯಾತ ಸಾಫ್ಟ್ ವೇರ್ ವಿಕಾಸಕರೂ ಕೆ ಪಿ ಟಿ ಮಂಗಳೂರು ಇದರ ನಿವೃತ್ತ ಪ್ರಾಚಾರ್ಯರೂ ಆದ ಹರೀಶ ಶೆಟ್ಟಿಯವರು ವಿಶ್ವಕರ್ಮ ಕಲಾ ಪರಿಷತ್ (ರಿ.), ಮಂಗಳೂರು, ಎಸ್. ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ. ಲಿ.‌ಇದರ ಆಶ್ರಯದಲ್ಲಿ ಕಲಾವಿದರು ಹಾಗೂ ಕುಶಲಕರ್ಮಿಗಳಿಗಾಗಿ ಪಾಲ್ಕೆ ಬಾಬುರಾಯ ಆಚಾರ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ ಇಂಪ್ಯಾಕ್ಟ್ ‘ – ಹಸ್ತಕೌಶಲದಿಂದ ಹ್ಯಾಶ್ ಟ್ಯಾಗ್ ವರೆಗೆ , ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರದ ದಿಕ್ಸೂಚಿ ಭಾಷಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಆoತರ್ರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ, ರುದ್ರ ಹನುಮಾನ್ ಖ್ಯಾತಿಯ ಕರಣ್ ಆಚಾರ್ಯ, ಸಾಮಾಜಿಕ ಮಾಧ್ಯಮವನ್ನು ಕೌಶಲ್ಯಯುಕ್ತವಾಗಿ ಜಾಣ್ಮೆಯಿಂದ ಬಳಸಿಕೊಂಡರೆ ಕಲಾವಿದರು ಹೆಚ್ಚಿನ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.‌

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ ಕೆ ಜಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯರು ಇಂತಹ ಕಾರ್ಯಾಗಾರಗಳು ಕಲಾವಿದರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಕಟ್ಟಿಕೊಳ್ಳಲು ಬಹಳ ಅಗತ್ಯ ಎಂದರು.

ವಿಶ್ವಕರ್ಮ ಕಲಾ ಪರಿಷತ್ ರಿ. ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಸ್ ಪಿ ಗುರುದಾಸ್ ಸ್ವಾಗತಿಸಿದರು

ಭಜನೆ, ಸುಗಮ ಸಂಗೀತ ಹಾಗೂ ಮದರಂಗಿ ತರಬೇತಿ ತರಗತಿಗಳಿಗೆ ಚಾಲನೆಯ ಪೋಸ್ಟರನ್ನು ವೇದಿಕೆಯಲ್ಲಿರುವ ಗಣ್ಯರು ಬಿಡುಗಡೆಗೊಳಿಸಿದರು.

ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಗಾರವನ್ನು ಪ್ರಧಾನ ಸಂಪನ್ಮೂಲ ವ್ಯಕ್ತಿ ಕು ಪೂಜಾ ಆಚಾರ್ಯ ನೀಡಿದರು

ಭರತ್ ರಾಜ್ ಬೈಕಾಡಿ ಮತ್ತು ಜೀವನ್ ಆಚಾರ್ಯ ಸಹಕರಿಸಿದರು. ಕೆ.ರವಿಶಂಕರ್ ಸಂಗೀತ ನಿರ್ದೇಶಕರು ಹಾಗೂ ಸಂಗೀತ ಶಿಕ್ಷಕರು ಶ್ರೀಮತಿ ರತ್ನಾವತಿ ಜೆ. ಬೈಕಾಡಿ ರೂವಾರಿ.ಕಾಂಮ್ ಮತ್ತು ಕುಮಾರಿ ಆದ್ವಿಕಾ ಆಚಾರ್ಯ ಮದರಂಗಿ ಕಲಾ ತರಬೇತಿದಾರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲಾಪರಿಷತ್ ನ ಕಾರ್ಯದರ್ಶಿಯಾದ ಶ್ರೀಮತಿ ರಮ್ಯಾ ಲಕ್ಷ್ಮೀಶ್ ಪ್ರಾರ್ಥನೆ ಗೈದರು. ಎಸ್ ಕೆ ಜಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಜಿ. ಎಂ. ಯಜ್ಞೇಶ್ವರ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು