ದಿ. 13-8-2026 ಗುರುವಾರದಂದು ನಮ್ಮ ವಿಶ್ವಕರ್ಮ ಕಲಾ ಪರಿಷತ್ ( ರಿ.), ಮಂಗಳೂರು ಇದರ ವತಿಯಿಂದ ನಮ್ಮ ಕಲಾ ಪರಿಷತ್ತಿನ‌ ನಿರಂತರ ಪೋಷಕರು, ಸಕ್ರಿಯ ಸದಸ್ಯರು, ಕಲಾ ತಜ್ಞರ ಸಮಾಲೋಚನಾ ಸಭೆಯಲ್ಲಿ ಇತ್ತೀಚೆಗೆ ಸ್ಟಾರ್ಟ್ ಅಪ್ ಉದ್ಯಮದಲ್ಲಿ ರಾಷ್ಟ್ರಪತಿಗಳ ಗೌರವಕ್ಕೆ ಪಾತ್ರರಾದ, ಕೇಂದ್ರ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯದ ಪ್ರಶಸ್ತಿಗೂ ಪಾತ್ರರಾದ ‘ ಮಾವೇದಾಸ್ ಫುಡ್ಸ್ ಅಂಡ್ ಸೀರಿಯಲ್ಸ್’ ನ ಸಂಸ್ಥಾಪಕಿ, ವಿಶ್ವಕರ್ಮ ಕಲಾ ಪರಿಷತ್ ಸದಸ್ಯೆ, ಶ್ರೀಮತಿ ಅನುಷಾ ಪ್ರಜ್ವಲ್ ಆಚಾರ್ ಇವರನ್ನು ನಮ್ಮ ಕಲಾ ಪರಿಷತ್ ವತಿಯಿಂದ ಅಭಿನಂದಿಸಲಾಯಿತು.

ಕಲಾಪರಿಷತ್ ಡಿಸೆಂಬರ್ 25, 26, 27 ರಂದು ಆಯೋಜ ಜನನ ಸಲಿರುವ ಬೃಹತ್ ಸಾರ್ವಜನಿಕ‌ ಕಲೋತ್ಸವ ಹಾಗೂ ಕರಾವಳಿ‌ ಕಲಾವಿದರ, ಕುಶಲಕರ್ಮಿಗಳ, ಶಿಲ್ಪಿಗಳ ಸಮಾವೇಶದ ಕುರಿತಾಗಿ ನಗರದ ಪತ್ತುಮುಡಿ ಸೌಧದಲ್ಲಿ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಅನುಷಾ ಆಚಾರ್ ಸಾಂಪ್ರದಾಯಿಕ, ಪಾರಂಪರಿಕ ಜ್ಞಾನ ಅಳಿದು ಹೋಗಬಾರದು, ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎನ್ನುವ ಧ್ಯೇಯ ಹಾಗೂ ತೀವ್ರ ಕಾಳಜಿಯೇ ಈ ಪ್ರಶಸ್ತಿ ಗೌರವವನ್ನು ತಂದುಕೊಟ್ಟಿತು ಎಂದರು. ಈ ಸ್ಟಾರ್ಟಪ್ ಉದ್ಯಮ ಸ್ಥಾಪಿಸಿ ಬೆಳೆಸಲು ನಿರಂತರ ಮಾರ್ಗದರ್ಶನ ಸಹಕಾರ ನೀಡಿದ ಪತಿ ಪ್ರಜ್ವಲ್ ಆಚಾರ್, ಮಾವ ಡಾ. ಜಿ. ರಾಮಕೃಷ್ಣ ಆಚಾರ್, ನಿಟ್ಟೆಯ ಎ ಐ ಸಿ ಯ ಸಿ ಇ ಒ ಆಗಿದ್ದ ಡಾ. ಎ. ಪಿ. ಆಚಾರ್ ಅವರ ಸಹಾಯವನ್ನು ನೆನೆದರು. ಅಧ್ಯಕ್ಷತೆ ವಹಿಸಿದ್ದ ಎಸ್. ಕೆ. ಎಫ್. ಎಲಿಕ್ಸರ್ ಇಂಡಿಯಾ ಪ್ರೈ. ಲಿ. ನ ಚೇರ್ ಮನ್ ಡಾ. ಜಿ. ರಾಮಕೃಷ್ಣ ಆಚಾರ್ ಅನುಷಾ ಅವರ ಸಾಧನೆಯನ್ನು ಶ್ಲಾಘಿಸಿ ಭವಿಷ್ಯದಲ್ಲಿ ಕೌಶಲ್ಯ ಹಾಗೂ ಉದ್ಯಮಶೀಲತೆಯಿಂದ ಮಾತ್ರ ಯುವಜನಾಂಗ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು. ಖ್ಯಾತ ಲೆಕ್ಕ ಪರಿಷೋಧಕರಾದ ಸಿ ಎ ಎಸ್ ಎಸ್ ನಾಯಕ್ ಅತ್ಯಂತ ಪ್ರತಿಭಾವಂತ ಜನಾಂಗವಾದ ವಿಶ್ವಕರ್ಮ ಜನಾಂಗವು ತನ್ನ ಸ್ವಸಾಮರ್ಥ್ಯವನ್ನು ಅರಿತುಕೊಂಡು ಬೆಳೆಯಲು ವಿಶ್ವಕರ್ಮ ಕಲಾ ಪರಿಷತ್ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಈ ಸಂಸ್ಥೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ವಿಶ್ವಕರ್ಮ ಕಲಾ ಪರುಷತ್ತಿನ ಅಧ್ಯಕ್ಷರಾದ ಡಾ. ಎಸ್ ಪಿ. ಗುರುದಾಸ್ ಡಿಸೆಂಬರ್ ನಲ್ಲಿ ಆಯೋಜಿಸಲಿರುವ ಸಾರ್ವಜನಿಕ ಕಲೋತ್ಸವದ ರೂಪುರೇಷೆಗಳನ್ನು ಮಂಡಿಸಿದರು. ಖ್ಯಾತ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಖ್ಯಾತ ಕಲಾವಿದ, ಪರಿಸರಪ್ರೇಮಿ ದಿನೇಶ್ ಹೊಳ್ಳ, ಎಸ್. ಕೆ. ಜಿ. ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ, ವಿಜ್ಞಾನಿ ಡಾ. ಜಿ. ಕೆ. ಆಚಾರ್ಯ ಫರೀದಾಬಾದ್ ಕಲೋತ್ಸವದ ಕುರಿತಾದ ಉತ್ತಮವಾದ ಸಲಹೆಗಳನ್ನು ನೀಡಿದರು. ಕಲಾ ಪರಿಷತ್ತಿನ ಗೌರವಾಧ್ಯಕ್ಷ ಪಿ. ಎನ್. ಆಚಾರ್ಯ ಉಡುಪಿ, ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಮೊಕ್ತೇಸರರಾದ ಸುಂದರ ಆಚಾರ್ಯ ಬೆಳುವಾಯಿ, ಪತ್ರಕರ್ತ ಸೀತಾರಾಮ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರುಸೇವಾ ಪರಿಷತ್, ಮಂಗಳೂರು ಇದರ ಅಧ್ಯಕ್ಷ ಕಡೇಶ್ವಾಲ್ಯ ನಾಗರಾಜ ಆಚಾರ್ಯ, ಸಹಚಿಂತನ ಮಾಸಪತ್ರಿಕೆ ಪ್ರಕಾಶಕ ಎಸ್. ವಿ. ಆಚಾರ್, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಸಿದ್ಧಕಟ್ಡೆ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ ಅರುಣಾ ಸುರೇಶ್, ಎಸ್. ಕೆ.ಜಿ. ಐ. ಸೊಸೈಟಿಯ ಜಿ. ಎಂ. ಯಜ್ಞೇಶ್ವರ ಕೃಷ್ಣಾಪುರ, ವಿಶ್ವಕರ್ಮ ಒಕ್ಕೂಟದ ಹರ್ಷವರ್ಧನ್ ನಿಟ್ಟೆ ಮುಂತಾದ ಮುಖಂಡರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. ಕಲಾ ಪರಿಷತ್ ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಸ್ವಾಗತಿಸಿದರು. ವಾಗ್ಮಿ ಎನ್. ಆರ್. ದಾಮೋದರ ಶರ್ಮ‌ ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ಎ.ಜಿ. ಸದಾಶಿವ ಧನ್ಯವಾದ ಸಮರ್ಪಿಸಿದರು. ಉದಯಭಾಸ್ಕರ ಸುಳ್ಯ ಅಭಿನಂದನಾ ಪತ್ರ ವಾಚಿಸಿದರು. ಕಲಾ ಪರಿಷತ್ ಗೌರವ ಸಲಹೆಗಾರರಾದ ಪ್ರೊ. ಜಿ. ಯಶವಂತ ಆಚಾರ್ಯ, ಜಿ. ಟಿ. ಆಚಾರ್ಯ, ದಿನೇಶ್ ಟಿ. ಶಕ್ತಿನಗರ ಪದಾಧಿಕಾರಿಗಳಾದ ರಮ್ಯ ಲಕ್ಷ್ಮೀಶ್, ನಾಗರಾಜ್ ಕೊಂಚಾಡಿ, ಶೇಖರ ಆಚಾರ್ಯ ಮಂಗಳಾದೇವಿ, ಅರ್ಚನಾ ಆಕಾಶಭವನ, ವೈ. ಎನ್. ತಾರಾನಾಥ ಆಚಾರ್ಯ, ಸುಧಾಮ ಆಚಾರ್ಯ, ಜೀವನ್ ಆಚಾರ್ಯ, ಸುಧಾಕರ ಆಚಾರ್ಯ, ಶ್ಯಾಮರಾಯ ಆಚಾರ್ಯ, ಸಹಕರಿಸಿದರು