ವಿಶ್ವಕರ್ಮ ಕಲಾಪರಿಷತ್ ರಿ. ಮಂಗಳೂರು ಇದರ ವತಿಯಿಂದ ಕುಶಲಕರ್ಮಿಗಳಿಗಾಗಿ ಆರ್ಟಿಸನ್ ಜಾಗೃತಿ ಕಾರ್ಯಾಗಾರ ಮತ್ತು ವಿಶ್ವ ಪರಿಸರ ದಿನ ಆಚರಣೆ
ವಿಶ್ವಕರ್ಮ ಕಲಾ ಪರಿಷತ್ ರಿ. ಮಂಗಳೂರು ಇದರ ವತಿಯಿಂದ ಎಸ್. ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಕರಕುಶಲ ಅಭಿವೃದ್ಧಿ ಇಲಾಖೆಯ ಆರ್ಟಿಸನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದ ಕುಶಲಕರ್ಮಿಗಳಿಗೆ ಆರ್ಟಿಸನ್ ಜಾಗೃತಿ ಕಾರ್ಯಾಗಾರವನ್ನು ಕೇಂದ್ರ ಸರ್ಕಾರದ, ಜವುಳಿ ಸಚಿವಾಲಯದ, ಕರಕುಶಲ ಕೇಂದ್ರದ ಸಹಾಯಕ ನಿರ್ದೇಶಕರಾದ ಶ್ರೀಮತಿ ರಾಜೇಶ್ವರಿ ಕೆ. ಎಂ. ಇವರು ಪಾಲ್ಕೆ ಬಾಬುರಾಯ ಆಚಾರ್ಯ ಸಭಾಂಗಣದಲ್ಲಿ ಉದ್ಘಾಟಿಸಿದರು. ಆ ಬಳಿಕ ಕುಶಲಕರ್ಮಿಗಳನ್ನುದ್ದೇಶಿಸಿ ಮಾತನಾಡುತ್ತಾ ಆರ್ಟಿಸನ್ ಕಾರ್ಡ್ ನಿಂದ ಆಗುವ ಪ್ರಯೋಜನವನ್ನು ತಿಳಿಸಿ, ಸರ್ಕಾರದ ಯೋಜನೆಯ ಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ವಿಶ್ವ ಪರಿಸರ ದಿನದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಸ್ ಕೆ ಜಿ ಐ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಶ್ರೀ ವಿ. ಜಯ ಆಚಾರ್ ಕಾರ್ಯಕ್ರಮ ಉದ್ದೇಶಿಸಿ, ಸರ್ಕಾರದ ಯೋಜನೆಗಳ ಪ್ರಯೋಜನ ಪಢದುಕೊಳ್ಳವಲ್ಲಿ, ಹಿಂಜರಿಕೆ, ಔದಾಸೀನ್ಯ ಸಲ್ಲದು ಎಂದರು. ಸಮಾರಂಭದ ವೇದಿಕೆಯಲ್ಲಿ ವಿಶ್ವಕರ್ಮ ಕಲಾಪರಿಷತ್ ಕೋಶಾಧಿಕಾರಿಯಾದ ಶ್ರೀ ಎ. ಜಿ. ಸದಾಶಿವ ಮಂಗಳಾದೇವಿ ಮತ್ತು ಕರಕುಶಲ ಅಭಿವೃದ್ಧಿ ಅಧಿಕಾರಿ ಶ್ರೀ ಸಾಯಿ ಕುಮಾರ್ ಕಲ್ಕುರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 63 ಮಂದಿ ಆರ್ಟಿಸನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ ಕುಶಲಕರ್ಮಿಗಳು ಭಾಗವಹಿಸಿದ್ದರು. ಎಸ್ ಕೆ ಜಿ ಐ ಕೋ- ಆಪರೇಟಿವ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಶಶಿಕಾಂತ್ ಆಚಾರ್ಯ ಮತ್ತು ಶ್ರೀಮತಿ ರೋಹಿಣಿ ಎಂ. ಪಿ. ಉಪಸ್ಥಿತರಿದ್ದರು. ವಿಶ್ವಕರ್ಮ ಕಲಾಪರಿಷತ್ ನ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಜರಗಿತು. ವಿಶ್ವಕರ್ಮ ಕಲಾಪರಿಷತ್ ನ ಕಾರ್ಯದರ್ಶಿಯಾದ ಶ್ರೀಮತಿ ರಮ್ಯಾ ಲಕ್ಷ್ಮೀ ಸ್ವಾಗತ ಮತ್ತು ಪ್ರಸ್ತಾವನೆ ಗೈದರು ಶ್ರೀಮತಿ ಸುಧಾ ವಿಶ್ವನಾಥ್ ಪ್ರಾರ್ಥನೆ ಗೈದರು ಶ್ರೀಮತಿ ಅರ್ಚನಾ ಸುಂದರ ವಂದನಾರ್ಪಣೆ ಸಲ್ಲಿಸಿದರು. ಎಸ್ ಕೆ ಜಿ ಐ ಸೊಸೈಟಿಯ ಜಿ ಎಂ ಆಗಿರುವ ಯಜ್ಞೇಶ್ವರ ಆಚಾರ್ಯ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.

