ಸಾಂಪ್ರದಾಯಿಕ ಭಜನಾ ಸ್ಪರ್ಧೆ ಭಜನಾ ವೈಭವ ೨೦೨೬ - ಪ್ರಥಮ ಸ್ಥಾನ

ಅವಿಭಜಿತ ದ. ಕ. ಜಿಲ್ಲೆಯ ವಿಶ್ವಕರ್ಮ ಸಮುದಾಯದ ಕೇಂದ್ರ ಸಂಸ್ಥೆಯಾದ ವಿಶ್ವಕರ್ಮ ಒಕ್ಕೂಟದ ವತಿಯಿಂದ ನಿನ್ನೆ ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ನಡೆದ ದ. ಕ., ಉಡುಪಿ, ಉ. ಕ., ಹಾಗೂ ಕಾಸರಗೋಡು ಜಿಲ್ಲೆಗಳ ವಿಶ್ವಕರ್ಮ ಸಮುದಾಯದವರಿಗಾಗಿ ಜರಗಿದ ಸಾಂಪ್ರದಾಯಿಕ ಭಜನಾ ಸ್ಪರ್ಧೆ ಭಜನಾ ವೈಭವ ೨೦೨೬ ರಲ್ಲಿ ವಿಶ್ವಕರ್ಮ ಕಲಾ ಪರಿಷತ್ ( ರಿ.), ಮಂಗಳೂರು ಇದರ ಯುವ ತಂಡವು ಪ್ರಥಮಸ್ಥಾನವನ್ನು ಪಡೆದು ವಿಜೇತವಾಗಿದೆ. ಕು. ಶ್ರದ್ಧಾ ಗುರುದಾಸ್, ಕು. ಅಮೃತಾ ಎ. ಜಿ.ಎಸ್., ಶ್ರೀ ನವಮ್ ಆಚಾರ್ಯ ಮುಡಿಪು, ಮಾ. ತೇಜಸ್ ಆಚಾರ್ಯ ಕೃಷ್ಣಾಪುರ, ಶ್ರೀ ಗುರು ಅಭಿಷೇಕ್, ಕು. ಧೃತಿ ಹಾಗೂ ಕು. ಸಾನ್ವಿಕಾ ಪ್ರಶಾಂತ್ ಇವರನ್ನೊಳಗೊಂಡ ಈ ತಂಡವು ಭಾಗವಹಿಸಿದ ಹದಿನೆಂಟು ತಂಡಗಳಲ್ಲಿ ಅಗ್ರಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕೆ. ಜಿ. ಎಫ್. ಖ್ಯಾತಿಯ ಖ್ಯಾತ ಸಂಗೀತ ನಿರ್ದೇಶಕ ಶ್ರೀ ರವಿ ಬಸ್ರೂರು ಈ ತಂಡವನ್ನು ಅಭಿನಂದಿಸಿದರು. ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಶ್ರೀ ಮಧು ಆಚಾರ್ಯ, ಉಪಾಧ್ಯಕ್ಷರಾದ ಅಲೆವೂರು ಯೋಗೀಶ ಆಚಾರ್ಯ, ಕ್ಷೇತ್ರದ ಮೊಕ್ತೇಸರರಾದ ಕೆ. ಮುರಹರಿ ಅಚಾರ್ಯ, ವಿಶ್ವಕರ್ಮ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ ಆಚಾರ್ಯ, ಉದ್ಯಮಿ ಶ್ರೀ ಪಾಂಡುರಂಗ ಆಚಾರ್ಯ ಪ್ರಶಸ್ತಿ ವಿತರಿಸಿದರು. ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್, ಖಜಾಂಚಿ ಶ್ರೀ ಎ. ಜಿ. ಸದಾಶಿವ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಯಜ್ಞೇಶ್ವರ ಕೃಷ್ಣಾಪುರ, ಅರ್ಚನಾ ಆಕಾಶಭವನ, ಸದಸ್ಯರಾದ ಸ್ನೇಹಾ ಗುರುದಾಸ್, ಪ್ರಶಾಂತ್ ಕೋಟೆಕಾರ್, ಸುನಿಲ್ ಟಿ ಮುಂತಾದವರು ಉಪಸ್ಥಿತರಿದ್ದರು. ಯುವ ತಂಡದ ಈ ವಿಶೇಷ ಸಾಧನೆಗೆ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್ ಅಭಿನಂದಿಸಿದ್ದಾರೆ.